ಚಂಗಲ ಕೋಷ್ಠ-
ಜಿûಂಜಿûಬರೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಹಾಗೂ ಔಷಧಿಸಸ್ಯ.  ಪುಷ್ಕರ ಮೂಲ, ಪದ್ಮಪತ್ರ ಪರ್ಯಾಯ ನಾಮಗಳು.  ಕಾಸ್ಟಸ್ ಸ್ಪೀಷಿಯೋಸಸ್ ಶಾಸ್ತ್ರೀಯ ಹೆಸರು.  ಸಾಮಾನ್ಯ ಇಂಗ್ಲಿಷಿನಲ್ಲಿ ಎಲಿಫೆಂಟ್ ಆರೋರೂಟ್,  ಸ್ವೀಟ್ ಕಾಸ್ಟಸ್ ಎಂಬ ಹೆಸರುಗಳಿವೆ.  ಇದು ಭಾರತ ಮತ್ತು ವಲಯಗಳ ಮೂಲ ನಿವಾಸಿ.  ಭಾರತಾದ್ಯಂತ ಮೈದಾನ ಪ್ರದೇಶಗಳಿಂದ ಹಿಡಿದು 4000' ಎತ್ತರದ ಬೆಟ್ಟ ಸೀಮೆಗಳವರೆಗೆ ಇದರ ವ್ಯಾಪ್ತಿ ಉಂಟು.  ಇದು ಸುಮಾರು 4'-10' ಎತ್ತರಕ್ಕೆ ಬೆಳೆಯುವ ಪೊದೆಸಸ್ಯ.  ಕಾಂಡ ಪ್ರಕಂದ ಮಾದರಿಯದು.  ಎಲೆಗಳು ದೊಡ್ಡವು ; ಆಕಾರ ಈಟಿಮೊನೆಯಂತೆ.  ಹೂಗಳೂ ದೊಡ್ಡ ಗಾತ್ರದವು ; ಬಿಳಿಯ ದಳಗಳು ಮತ್ತು ಕೆಂಪು ವೃಂತಪತ್ರಕಗಳು ಇರುವುದರಿಂದ ಆಕರ್ಷಕವಾಗಿ ಕಾಣುತ್ತವೆ. ಗಿಡವನ್ನು ಪ್ರಕಂದದ ತುಂಡುಗಳಿಂದ ಬೆಳೆಸಲಾಗುತ್ತದೆ. ಹೆಚ್ಚು ತೇವವಿರುವ ಫಲವತ್ತಾದ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಇದನ್ನು ಬೆಳೆಸುವ ಸ್ಥಳದಲ್ಲಿ ನೆರಳಿರಬೇಕು. ಇದರ ಪ್ರಕಂದದಲ್ಲಿ ಅಧಿಕ ಮೊತ್ತದ ಪಿಷ್ಟವಿದೆ. ಆದ್ದರಿಂದ ಇದು ತಿನ್ನಲು ಯೋಗ್ಯವೆನಿಸಿದೆ. ಅಲ್ಲದೆ ಇದನ್ನು ಸಕ್ಕರೆಯ ಪಾಕದಲ್ಲಿ ಕುದಿಸಿ ಮುರಬ್ಬ ಮಾಡಿ ತಿನ್ನುವುದುಮಟು. ಬೇರು ಮತ್ತು ಪ್ರಕಂದಗಳಿಗೆ ಔಷಧೀಯ ಗುಣಗಳು ಇವೆ. ಪ್ರಕಂದ ಒಳ್ಳೆಯ ಶಕ್ತಿವರ್ಧಕ ಹಾಗೂ ವಿರೇಚಕ. ಕೆಮ್ಮು, ಚರ್ಮರೋಗ, ಅಗ್ನಿಮಾಂದ್ಯ, ಶೀತದಿಂದುಂಟಾಗುವ ಜ್ವರ ನಿವಾರಣೆಗೆ ಹಾಗೂ ಜಂತುನಾಶಕ್ಕೆ ಇದನ್ನು ಬಳಸುತ್ತಾರೆ.
(ಎಸ್.ಐ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ